Tuesday, September 18, 2012

ಆಕಾಶದ ರೌದ್ರರೂಪ


ಮೊನ್ನೆ ಗುಡುಗು ಸಿಡಿಲಿನಿಂದ ತುಂಬಿರುವ ಬಿರುಗಾಳಿ ಬಂದಿತ್ತು ನನ್ನ ಮನೆಯ ಬಾಗಿಲಿಗೆ. ಆಗ ಕೆಲವೇ ಕ್ಷಣಗಳು ಆಕಾಶ ತನ್ನ ಬೇರೆಯೇ ರೂಪ ತೋರಿತ್ತು.. ಆಗ ಹೊಳೆದ ಸಾಲುಗಳು :

ಇಂದೇಕೆ ನೀ ಕೆರಳಿದ ರೂಪ ತೋರಿರುವೆ ನೀಲಾಕಾಶ?

ಮೇಘರಾಜನ ಆರ್ಭಟಕೆ ನಲುಗಿ ನರಳಿ ದಿಯೋ ?
ಅಥವಾ ಸಿಡುಕಿ ಧಗಧಗಿಸಿತಿರುವೆ?

ಅದೇಕೆ ನಿನ್ನ ನೋಡಿದಾಗ ತಳಮಳಿಸುತಿದೆ ನನ್ನ ಮನ?
ಮನದ ಅಲ್ಲೋಲ ಕಲ್ಲೋಲದ ಪ್ರತಿಬಿಂಬವಾಗೇಕೆ  ನಿಂದಿರುವೆ?

ಕ್ಷಣಮಾತ್ರದ ನಿನ್ನೀ ರುದ್ರರೂಪ ಮನಸಿನಲೇಕೆ  ತಳವೂರಿದೆ?
ದಿನಕಳೆದರೂ ಮಾಸದ ಚಿತ್ರದಂತೇಕೆ  ಹೃದಯದಲಿ ನಾಟಿರುವೆ ?

No comments:

Post a Comment