Thursday, August 18, 2011

ಸೋಮಾರಿತನ

ಅಂತೂ ಬರೆದೆ ಅಂತ ಬರೆದು ಆಗಲೇ ಎರಡು ವರ್ಷ ಆಗ್ತಾ ಬಂತು. ನಾನು ಎಷ್ಟರ ಮಟ್ಟಿಗೆ ಬ್ಲಾಗ್ ಬರೀತೀನಿ ಅಂತ ಆಗಲೇ ಗೊತ್ತಾಗ್ತಾ ಇದೆ. ಬರೀ ಲೇಖಕಿ ಆಗೋ ಕನಸು ಕಾಣೋದೇ ಆಯ್ತು, ಕಾರ್ಯ ರೂಪದಲ್ಲಿ ಇಳಿಸಲು ಮಹಾ ಸೋಮಾರಿತನ. ಎಲ್ಲಿಂದ ಬಂತೋ ಈ ಸೋಮಾರಿತನ ? ಯಾವುದೇ ಪುಸ್ತಕ ಓದೋದಿರಲಿ, ಆಗಾಗ ಜೀವನದಲ್ಲಿ ನಡೆಯುವ ಮನೋರಂಜಕ ಘಟನೆಗಳ ಬಗ್ಗೆ ಗೀಚೋದಿರಲಿ, ಹೊಸ ಹವ್ಯಾಸ ಬೆಳೆಸುವುದಿರಲಿ ಎಲ್ಲೆದರಲ್ಲೂ ಈ ಸೋಮಾರಿತನ ಅಡ್ಡ ಯಾಕೆ ಬರತ್ತೆ? ಹುಂ... ಇದರ ಬಗ್ಗೆ ಯೋಚಿಸಲೂ ಈ ಸೋಮಾರಿತನ ನನ್ನ ಬಿಡದು.
ಅಂತೂ ಎರಡು ವರ್ಷಗಳ ನಂತರ ಅಕ್ಷರಗಳ ಪೋಣಿಸಿದ್ದಾಯ್ತು.
ನೋಡೋಣ ಎಷ್ಟರ ಮಟ್ಟಿಗೆ ನಾನು ಸೋಮಾರಿತನವನ್ನ ಎದುರಿಸ ಬಲ್ಲೆ..
ಈಗಲಾದರೂ ಸ್ವಲ್ಪ ಪ್ರಯತ್ನವ ಮಾಡಿದರಾಯಿತು, ಮನದ ಕಲರವ ಹಾಗು ಸುತ್ತಲಿನ ಕಲರವ ವ ಅಕ್ಷರಗಳಲ್ಲಿ ಸೆರೆಹಿಡಿಯಲು...

No comments:

Post a Comment